Mr. Manju, Teacher

Devangapet Govt. Higher Primary School, Anekal Town

ಬೆಂಗಳೂರು ದಕ್ಷಿಣ ಜಿಲ್ಲೆಯ ಆನೇಕಲ್ ಟೌನ್ ನಲ್ಲಿರುವ ದೇವಾಂಗಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐಕಲ್ ಸಂಸ್ಥೆಯಿಂದ ನಿರ್ಮಿಸಲಾದ ಸಭಾಂಗಣ ಮತ್ತು ಶಾಲಾ ಕಾಂಪೌಂಡ್ ಅನ್ನು ಟ್ವಿನ್ ಗ್ಲೇಶಿಯರ್ ಸಂಸ್ಥೆ ಅತ್ಯಂತ ಗುಣಮಟ್ಟ ಹಾಗೂ ದಕ್ಷತೆಯಿಂದ ನಿರ್ಮಾಣ ಮಾಡಿಕೊಟ್ಟಿದೆ. ಹಾಗೆಯೇ ಟ್ವಿನ್ ಗ್ಲೇಶಿಯರ್ ಸಂಸ್ಥೆಯು ಮಕ್ಕಳು ಕುಳಿತುಕೊಳ್ಳುವಂತಹ ಕಲ್ಲು ಬೆಂಚಿನ ಸಿಟ್ಟಿಂಗ್ ಅನ್ನು ಮತ್ತು ಶಾಲೆಯ ಒಂದನೇ ಮಹಡಿಗೆ ಹೋಗುವ ಮೆಟ್ಟಿಲುಗಳ ಮೇಲೆ ಮಕ್ಕಳಿಗೆ ಮಳೆ, ಬಿಸಿಲಿನಿಂದ ರಕ್ಷಣೆ ನೀಡುವ ಸಲುವಾಗಿ ಶೀಟ್ಗಳ ಹೊದಿಕೆ ಮಾಡಿ ಅತ್ಯಂತ ಉಪಯುಕ್ತವಾದಂತ ಕೆಲಸ ಮಾಡಿಕೊಟ್ಟಿದೆ ಹಾಗೂ ಟ್ವಿನ್ ಗ್ಲೇಶಿಯರ್ ಮುಖ್ಯಸ್ಥರು ತಮ್ಮ ಒಡನಾಟ ಇರುವ ಸ್ವಯಂಸೇವಾ ಸಂಸ್ಥೆ ಯವರನ್ನು ಶಾಲೆಗೆ ಕರೆತಂದು ಕಾಂಪೌಂಡ್ ಮೇಲೆ ಸುಂದರವಾದ ಶೈಕ್ಷಣಿಕ ಉಪಯುಕ್ತ ಚಿತ್ರಗಳನ್ನು ಬರೆಯಿಸಿದ್ದಾರೆ. ಇವರ ದಕ್ಷತೆ ಮತ್ತು ಗುಣಮಟ್ಟದ ಕಾರ್ಯವನ್ನು ಶಿಕ್ಷಣ ಇಲಾಖೆ, ಶಾಲೆಯ ಎಸ್ ಡಿ ಎಂ ಸಿ ,ಶಿಕ್ಷಕರು, ಪೋಷಕರು ಮೆಚ್ಚಿ ಅಭಿನಂದಿಸುತ್ತೇವೆ.