Mrs Sarojini, Head Master
Devangapet Govt. Higher Primary School, Anekal Town
ನಮಸ್ಕಾರ ನಾನು ಬೆಂಗಳೂರು ದಕ್ಷಿಣ ಜಿಲ್ಲೆ ಆನೇಕಲ್ ತಾಲೂಕಿನ ಆನೇಕಲ್ ಟೌನ್ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ದೇವಾಂಗಪೇಟೆ ಶಾಲೆಯ ಮುಖ್ಯ ಶಿಕ್ಷಕಿ ಸರೋಜಾ ಮೇಡಂ ಎಂದು ಇಂದು ನಮ್ಮ ಶಾಲೆಯು ಆಕರ್ಷಕವಾಗಿದ್ದು ಎಲ್ಲರನ್ನು ಸೆಳೆಯುತ್ತಿದೆ ಇದಕ್ಕೆ ಮುಖ್ಯ ಕಾರಣವೇನೆಂದರೆ 2023 ಮಾರ್ಚ್ ತಿಂಗಳ ಹಿಂದೆ ನಮ್ಮ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇತ್ತು ಶಾಲೆಗೆ ಕಾಂಪೌಂಡ್ ಸಭಾಂಗಣ ಇರಲಿಲ್ಲ ಇರಲಿಲ್ಲ ಇದರಿಂದ ಶಾಲಾ ಆಸ್ತಿಪಾಸ್ತಿ ನಷ್ಟವಾಗುತ್ತಿತ್ತು ಮಳೆಗಾಲದಲ್ಲಿ ಶಾಲಾ ಮಕ್ಕಳಿಗೆ ಪ್ರಾರ್ಥನೆ ಮತ್ತು ಅಕ್ಷರ ದಾಸೋಹ ಕಾರ್ಯಕ್ರಮಗಳಿಗೆ ಬಹಳ ತೊಂದರೆಯಾಗುತ್ತಿತ್ತು ಇಂತಹ ಸಂದರ್ಭದಲ್ಲಿ ಜಿಗಣಿಯ ಹೈಕಲ್ ಸಂಸ್ಥೆಯು ಮುಂದೆ ನಮ್ಮ ಶಾಲೆಗೆ ಕಾಂಪೌಂಡ್ ಮತ್ತು ಸಭಾಂಗಣ ನಿರ್ಮಿಸಿಕೊಡಲು ಹಣ ಮಂಜೂರು ಮಾಡಿದ್ದು ಇದರ ನಿರ್ಮಾಣದ ಜವಾಬ್ದಾರಿಯನ್ನು ಟ್ವಿನ್ ಗ್ಲೇಷಿಯರ್ ಸಂಸ್ಥೆಗೆ ವಹಿಸಿಕೊಟ್ಟರು ಅವರು ಬಹಳ ಕಾಳಜಿಯಿಂದ ಸುಸಜ್ಜಿತವಾದ ಕಾಂಪೌಂಡ್ ಮತ್ತು ಸಭಾಂಗಣವನ್ನು ನಿರ್ಮಿಸಿ ಕೊಡುವುದರ ಜೊತೆಗೆ ಕಾಂಪೌಂಡ್ ಗೋಡೆಗಳಿಗೆ ಶೈಕ್ಷಣಿಕ ಚಿತ್ರ ಬರಹಗಳನ್ನು ಬರೆಸಿ ಕೊಟ್ಟಿರುತ್ತಾರೆ ಹಾಗೆಯೇ ಕೈತೊಳೆಯುವ ಘಟಕವನ್ನು ಮಾಡಿಸಿರುತ್ತಾರೆ ಹಾಗೆಯೇ ಶಾಲೆಯ ಮೊದಲ ಅಂತಸ್ತಿನ ಮೆಟ್ಟಿಲುಗಳ ಮೇಲೆ ಮಳೆಗಾಲದಲ್ಲಿ ಮಕ್ಕಳಿಗೆ ಶಿಕ್ಷಕರಿಗೆ ಓಡಾಡಲು ಕಷ್ಟವಾಗಬಾರದೆಂದು ಶೀಟ್ ವ್ಯವಸ್ಥೆ ಮಾಡಿಸಿರುತ್ತಾರೆ ಹಾಗೆಯೇ ಶಾಲೆಯ ಮುಂಭಾಗದಲ್ಲಿ ಚರಂಡಿಗೆ ಕಲ್ಲು ಚಪ್ಪಡಿಗಳನ್ನು ಹಾಕಿಸಿ ಸೊಳ್ಳೆಗಳಿಂದ ನಮ್ಮನ್ನು ರಕ್ಷಿಸಿರುತ್ತಾರೆ ಹಾಗೆಯೇ ಶಾಲಾ ಕಂಪಣ್ಣ ಒಂದು ಭಾಗದಲ್ಲಿ ಅಂದವಾದ ಬೆಂಚ್ ವ್ಯವಸ್ಥೆಯನ್ನು ಮಾಡಿಸಿ ಕೊಟ್ಟಿರುತ್ತಾರೆ ಹಾಗೆಯೇ ಮಕ್ಕಳ ಆಟದ ಉಯ್ಯಾಲೆ ಜಂಟಿ ಉಯ್ಯಾಲೆ ಹಾಗೂ ಜಾರು ಬಂಡಿಯನ್ನು ನವೀಕರಿಸಿ ಕೊಟ್ಟಿರುತ್ತಾರೆ ಇಷ್ಟೆಲ್ಲ ಶಾಲೆಗೆ ಕೊಡುಗೆಯನ್ನು ನೀಡಿರುವ ಹೈಕಲ್ ಕಂಪನಿ ಜಿಗಣಿ ಮತ್ತು ಟ್ವಿನ್ ಗ್ಲೇಶಿಯರ್ ಸಂಸ್ಥೆಯವರಿಗೆ ಶಾಲೆಯ ಪರವಾಗಿ ಅನಂತ ಧನ್ಯವಾದಗಳು ಅರ್ಪಿಸುತ್ತಿದ್ದೇನೆ